“Book Descriptions: ಕುವೆಂಪು ಅವರ ಪ್ರೇಮಕವಿತೆಗಳ ಸಂಕಲನ ’ಪ್ರೇಮ ಕಾಶ್ಮೀರ’. ಈ ಸಂಕಲನದಲ್ಲಿ 56 ಪ್ರೇಮಗೀತೆಗಳಿವೆ. 1946ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿತ್ತು. ಆ ಕಾಲದಿಂದ ಈ ಕಾಲಕ್ಕೂ ಜನಪ್ರಿಯವಾಗಿರುವ ಗೀತೆಗಳು.
ಒಂದು ತುಣುಕು:
ನಾನೆ ವೀಣೆ, ನೀನೆ ತಂತಿ, ಅವನೆ ವೈಣಿಕ; ಮಿಡಿದನೆನಲು ರಸದ ಹೊನಲು ಬಿಂದು ಬಿಂದು ಸೇರಿ ಸಿಂಧು ನಾದ ರೂಪಕ.
ಭುವನವೆಲ್ಲ ಸವಿಯ ಸೊಲ್ಲ ಕವಿಯ ಗಾನ; ನನ್ನ ನಿನ್ನ ಹೃದಯಮೀನ - ಕಲ್ಲಿ ಜೇನ ಸೊಗದ ಸ್ನಾನ; ಅಮೃತ ಪಾನ.” DRIVE