“Book Descriptions: ಕುವೆಂಪು ಅವರ ಸುಮಾರು ಎಪ್ಪತ್ತು ಕೃತಿಗಳು ಅವರ ಪ್ರತಿಭಾ ಮತ್ತು ದಾರ್ಶನಿಕ ಉನ್ಮೇಷಕ್ಕೆ ಪ್ರತಿಮೆಗಳಾಗಿವೆ. ಅವರ ಅಪೂರ್ವ ವಿಶಿಷ್ಟ ತಾತ್ವಿಕ ಚಿಂತನೆಗಳು, ಲೌಕಿಕಾಲೌಕಿಕಾನುಭವಗಳು, ಲೋಕೋತ್ತರ ಸಂದೇಶಗಳು, ಅವರು ಸೃಷ್ಟಿರುವ ಭಾಷೆ, ಉಪಮೆ, ರೂಪಕ, ಪ್ರತಿಮೆಗಳು, ಛಂದೋರೂಪಗಳು, ಅವರು ಶಿಲ್ಪಿಸಿರುವ ಪಾತ್ರಗಳು ಒಂದೇ ಎರೆಡೇ ನೂರೇ ಸಾವಿರವೆ, ಅಸಂಖ್ಯ ಸಂಗತಿಗಳು ನಾಡಿನ ಹಾಗು ಜಗತ್ತಿನ ಅಮೂಲ್ಯ ಸಾರಸ್ವತ ಸಂಪತ್ತಾಗಿವೆ; ಸದಾ ಅವರ ನೆನಪನ್ನುತುಂಬಿಕೊಡುತ್ತಿರುತ್ತವೆ. ಅವರು ರೂಪಿಸಿರುವ ಶಿಷ್ಯಸಂಪತ್ತು ಕಡಿಮೆಯೇನಲ್ಲ. ಅಂಥ ಕವಿಮಹರ್ಷಿಯನ್ನು ವಿಶ್ವಮಾನವನನ್ನು ಪಡೆದ ನಾಡು ಧನ್ಯ! - ದೇಜಗೌ” DRIVE