“Book Descriptions: ಟಿಪ್ಪು ನಿಜಕನಸುಗಳು ಕೃತಿಯಲ್ಲಿ ಇತಿಹಾಸದ ಹಲವು ಘಟನೆಗಳನ್ನು ಅತ್ಯಂತ ಶಕ್ತಿಶಾಲಿ ಸಂಭಾಷಣೆಗಲ್ಲಿ, ದೃಶ್ಯಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಟಿಪ್ಪುವಿನ ವ್ಯಕ್ತಿತ್ವದೊಳಗೆ ಸೂಕ್ಷ್ಮದರ್ಶಕವಿಟ್ಟು ನೋಡಿರುವಂತೆ ಆತನ ಬದುಕಿನ ಕತೆಯನ್ನು ಅತ್ಯಂತ ವಿಭಿನ್ನ ಶೈಲಿಯಲ್ಲಿ ಇಲ್ಲಿ ಹೇಳಲಾಗಿದೆ. ಕೃತಿಗೆ ಭಾರತದ ಮಹತ್ವದ ಸಾಹಿತಿಗಳಾದ ಡಾ. ಎಸ್. ಎಲ್. ಭೈರಪ್ಪ ಅವರ ಮುನ್ನುಡಿಯಿದೆ. ಕರ್ನಾಟಕದ ಪ್ರಖರ ಚಿಂತಕರೂ ವಾಗ್ಮಿಗಳೂ ಆಗಿರುವ ಚಕ್ರವರ್ತಿ ಸೂಲಿಬೆಲೆ ಬೆನ್ನುಡಿ ಬರೆದಿದ್ದಾರೆ. ನಾಟಕರಂಗದಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ತೊಡಗಿಸಿಕೊಂಡಿರುವ ಮತ್ತು ಮೈಸೂರು ರಂಗಾಯಣ ನಿರ್ದೇಶಕರಾದ ಅಡ್ಡಂಡ ಸಿ. ಕಾರ್ಯಪ್ಪ ಒಂದು ಅನನ್ಯ ಸಾಹಿತ್ಯಿಕ ಕೃತಿಯನ್ನು ಕನ್ನಡಕ್ಕೆ ಕೊಟ್ಟಿರುವುದರಲ್ಲಿ ಎರಡು ಮಾತಿಲ್ಲ.” DRIVE