“Book Descriptions: ಮಲೆನಾಡ ಮನೆ ಹುಡುಗ ಕೌಶಿಕ್ ಕೊಡುರಸ್ತೆಯ ಮತ್ತೊಂದು ಪತ್ತೆದಾರಿ ಕಾದಂಬರಿ ನಿಮ್ಮ ಕೈಯಲ್ಲಿದೆ. 'ಆತ್ಮೀಯ' ಎಂಬ ಸತ್ಯಘಟನೆಯಾಧಾರಿತ ಕಾದಂಬರಿಯ ಮೂಲಕ ಕನ್ನಡ ಸಾಹಿತ್ಯ ಲೋಕದ ಕದ ತಟ್ಟಿದ ಕೌಶಿಕ್, 'ಕಾಲಾಯ ತಸ್ಮೈ ನಮಃ' ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಭರ್ಜರಿಯಾಗಿ ಕಾಲೂರಿದ್ದಾನೆ. ಬೆರಗು ಕಣ್ಗಳ ಈ ಯುವಕನ ಪತ್ತೆದಾರಿ ನಿರೂಪಣಾ ಶೈಲಿಯೇ ವಿಭಿನ್ನ ಮತ್ತು ಆಹ್ಲಾದಕರ. ಕನ್ನಡಲ್ಲಿ ಪತ್ತೇದಾರಿ ಕಾದಂಬರಿಗಳೇ ವಿರಳವಾಗುತ್ತಿರುವ ಸಮಯದಲ್ಲಿ ಕೌಶಿಕ್ ಕೊಡುರಸ್ತೆ, ಕನ್ನಡ ಪತ್ತೆದಾರಿ ಕಾದಂಬರಿ ಪ್ರಕಾರದಲ್ಲಿ ಹೊಸ ಭರವಸೆಯೆಂದರೆ ತಪ್ಪಾಗಲಾರದು, ಓದುಗನಾಗಿ ಇವರ ಮಾದಲೆರೆಡು ಪುಸ್ತಕಗಳನ್ನು ಒಂದೇ ಗುಕ್ಕಿನಲ್ಲಿ ಓದಿಮುಗಿಸಿರುವ ಅನುಭವದ ಮೇಲೆ ಹೇಳುತ್ತೇನೆ, ಖಂಡಿತ ಈ ಕಾದಂಬರಿ ಕೂಡ ನಮ್ಮನ್ನು ಒಂದೇ ಗುಕ್ಕಿಗೆ ನಮ್ಮನ್ನು ಓದಿಸಿಕೊಳ್ಳುತ್ತದೆ ಮತ್ತು ಅಯ್ಯೋ! ಇಷ್ಟು ಬೇಗ ಮುಗಿಯಬಾರದಿತ್ತು, ಇನ್ನಷ್ಟಿರಬೇಕಿತ್ತು ಎನಿಸುವುದು ಖಂಡಿತ. ಅದೆಲ್ಲದರ ಜೊತೆಗೆ, ಕನ್ನಡ ಸಾಹಿತ್ಯಲೋಕದಿಂದ ಯುವ ಓದುಗರು ಬೇರೆ ಭಾಷೆಗಳ ಕಡೆ ವಲಸೆಹೊರಟಿರುವ ಸಂದರ್ಭದಲ್ಲಿ, ಅವರನ್ನು ಮರಳಿ ಕನ್ನಡ ಸಾರಸತ್ವ ಲೋಕದೆಡೆಗೆ ಸೆಳೆಯುವಲ್ಲಿ ಕೌಶಿಕ ರಂತಹ ಯುವ ಅವಶ್ಯಕತೆಯಿದೆ ಸಾಹಿತ್ಯಲೋಕಕ್ಕೆ. ಕನ್ನಡ ಸಾಹಿತ್ಯಲೋಕ ಕೌಶಿಕ್ ರವರನ್ನು ಅಪ್ಪಿಕೊಳ್ಳಲಿ, ಕನ್ನಡಿಗರು ಇವರ ಬರಹಗಳನ್ನು ಒಪ್ಪಿಕೊಂಡು ಸಾಹಿತ್ಯ ಲೋಕದಲ್ಲಿ ಮೆರೆಸಲಿ ಎಂಬುದು ನನ್ನಾಶಯ, ಕನ್ನಡದ ಯುವ ಲೇಖಕರನ್ನು ಬೆಳೆಸುತ್ತಿರುವ ನಿಮಗೆಲ್ಲರಿಗೂ ವಂದಿಸುತ್ತಾ, ಕೌಶಿಕಕೂಡುರಸ್ತೆಯವರಿಗೆ ಮನದಾಳದ ಶುಭಾಕಾಂಕ್ಷೆಗಳು.