“Book Descriptions: ಪರಾಡಳಿತದ ಪದತಳದಲ್ಲಿ ತುಳಿಯಲ್ಪಟ್ಟ ಸಣ್ಣ ದೇಶ ಪೋಲೆಂಡಿನಲ್ಲಿ ಜನಿಸಿದ ಈ ಹುಡುಗಿ, ಕಡು ಬಡತನದಲ್ಲಿ ದುಡಿದು ಕಲಿತು, ಪ್ರತಿಕೂಲ ಪರಿಸ್ಥಿತಿಗಲನ್ನು ಮೀರಿ ಜಗತ್ಪ್ರಸಿದ್ಧ ವಿಜ್ಞಾನಿಯಾದದ್ದು, ಭೌತಶಾಸ್ತ್ರ-ರಸಾಯನಶಾಸ್ತ್ರ ಎರಡರಲ್ಲೂ ನೊಬೆಲ್ ಪಾರಿತೋಷಕ ಪಡೆದದ್ದು, ಒಂದು ಅದ್ಭುತ ರಮ್ಯಕತೆಯಂತೆ ಭಾಸವಾಗುತ್ತದೆ. ವಿಜ್ಞಾನ ಚರಿತ್ರೆಯಲ್ಲೇ ಅತ್ಯಂತ ಕಷ್ಟದ ಆವಿಷ್ಕಾರ ‘ರೇಡಿಯಂ’. ಮೇರಿ ಕ್ಯೂರಿ, ಆಧುನಿಕ ಅನುಕೂಲತೆಗಳೊಂದೂ ಇಲ್ಲದೆ, ಆರ್ಥಿಕ ಮುಗ್ಗಟ್ಟಿನಲ್ಲಿ, ಮುರುಕಲು ಮರದ ಕೊಟ್ಟಿಗೆಯೊಂದರಲ್ಲಿ ‘ರೇಡಿಯಂ’ ಕಂಡುಹಿಡಿದಳು. ‘ರೇಡಿಯೋಆಕ್ಟಿವಿಟಿ’ ಎಂಬ ಹೊಚ್ಚ ಹೊಸ ರಂಗಕ್ಕೆ ಜನ್ಮಕೊಟ್ಟಳು. ಮೇರಿ ರೇಡಿಯಂನನ್ನು ಪೇಟೆಂಟ್ ಮಾಡದೆ, ಮಾನವ ಸೇವೆಗೆ ಮೀಸಲೆಂದು, ತನ್ನ ಸಂಶೋಧನೆಯ ಫಲಿತಾಂಶಗಳನ್ನೆಲ್ಲ ಪ್ರಕಟಿಸಿದ ಆ ಹೊತ್ತು, ಅಣುಯುಗದ ಅರುಣೋದಯವಾಯಿತು. ಮೇರಿಕ್ಯೂರಿಯ ಈ ಜೀವನ ಚಿತ್ರ ಒಂದು ಕಟ್ಟುಕತೆಯಂತೆ, ಸಾಹಸಗಾಥೆಯಂತೆ ಕಂಡರೆ ಅಚ್ಚರಿಯಿಲ್ಲ.” DRIVE