“Book Descriptions: ಕಳೆದ ಮೂರು ದಶಕಗಳಲ್ಲಿ ಸಾಪ್ತಾಹಿಕ, ವಾರಪತ್ರಿಕೆ, ಮಾಸಿಕ, ವಿಶೇಷಾಂಕಗಳಲ್ಲಿ ಪದೇ ಪದೇ ಕಾಣಿಸುವ ಹೆಸರು ವಸುಮತಿ ಉಡುಪ ಅವರದು.
ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕತೆಗಳ ವಸ್ತು 'ಬಂದನಾ ಹುಲಿರಾಯ', 'ಆಗ್ನಿದಿವ್ಯ', 'ಮೃಗತೃಷ್ಣಾ', 'ಪಾತಾಳ ಗರಡಿ', 'ನಮ್ಮ ನಡುವಿನ ಕಾಂತಾಮಣಿಯರು', 'ಅಂತರಂಗದ ಪಿಸುನುಡಿ', 'ಸಂಕ್ರಮಣ', 'ಬದುಕು ಮಾಯೆಯ ಮಾಟ' ಇವರ ಪ್ರಮುಖ ಕಥಾ ಸಂಕಲನಗಳು, ಕಥೆಗಳಂತೆಯೇ 'ಪರಿವರ್ತನೆ' 'ಸಂಬಂಧಗಳು', 'ವಿಮೋಚನ' ಮುಂತಾದ ಕಾದಂಬರಿಗಳೂ ಜನಮನ ಸೂರೆಗೊಂಡಿವೆ.
ಮಹಿಳೆಯರೇ ಕೇಂದ್ರಪಾತ್ರಗಳಂತೆ ಕಂಡರೂ ಯಾವುದನ್ನೂ ವೈಭವೀಕರಿಸಿದೆ, ನಿರ್ಭಾವುಕರಾಗಿ ಇಡೀ ಬದುಕನ್ನು ಕಂಡದ್ದು ಕಂಡ ಹಾಗೆ ಚಿತ್ರಿಸುತ್ತಾರೆ. ಇವರ ಕಥೆಗಳಲ್ಲಿ ಬರುವ ಮಹಿಳಾ ಪಾತ್ರಗಳು ಬದುಕಿನೊಂದಿಗೆ ಮುಖಾಮುಖಿಯಾಗುವ ಕ್ರಮ ಆಧುನಿಕ ಸೂಕ್ಷ್ಮತೆಗಳನ್ನು, ಗಟ್ಟಿತನವನ್ನು ಹೊಂದಿರುವಂತದ್ದು. 'ಮನ್ವಂತರ' 80ರ ದಶಕದ ಮಲೆನಾಡಿನ ಕೃಷಿಕ ಕುಟುಂಬದ ಬದುಕನ್ನು ಚಿತ್ರಿಸುವ ಕಾದಂಬರಿ.” DRIVE