“Book Descriptions: ಚರಿತ್ರೆಯ ಸಮಗ್ರ ಅಧ್ಯಯನ ನಡೆಯದೆ ಅದರ ವಿವಿಧ ಘಟ್ಟಗಳ, ಘಟನೆಗಳ ಹಾಗು ವ್ಯಕ್ತಿಗಳ ವಿಶಿಷ್ಟತೆ ಮಾತು ಪ್ರಾಮುಖ್ಯತೆಯ ಅರಿವಾಗಲು ಸಾಧ್ಯವಿಲ್ಲ. ಆದರೆ ಚರಿತ್ರೆಯ ಸಮಗ್ರ ಅಧ್ಯಯನ ಎಂದೆಂದಿಗೂ ಒಂದು ಮರೀಚಿಕಿಯೇ ಸರಿ. ಯಾವುದೇ ಕಾಲಘಟ್ಟದಲ್ಲಿ ನಮಗೆ ಸಿಗುವ ಚರಿತ್ರೆಯ ಸತ್ಯಾಸತ್ಯತೆಯು ಚರಿತ್ರೆಕಾರರ ಪಕ್ಷಪಾತದಿಂದಾಗಿ ಪೂರ್ವಾಗ್ರಹ ಪೀಡಿತವಾಗಿದ್ದು ಅದು ಅಪೂರ್ಣ ಮತ್ತು ಸತ್ಯಕ್ಕೆ ದೂರವೆಂದೇ ಭಾವಿಸಬೇಕು. ಈ ಕಾರಣದಿಂದಲೇ ಹಲವು ಚಾರಿತ್ರಿಕ ವ್ಯಕ್ತಿಗಳ ಮತ್ತು ವಲಯಗಳ ಪ್ರಾಮುಖ್ಯತೆ ಇನ್ನೂ ಜನ ಸಾಮಾನ್ಯರಿಗೆ ಅಜ್ಞಾತವಾಗಿಯೇ ಉಳಿದಿದೆ. ಪ್ರಸ್ತುತ ಕಾದಂಬರಿಯನ್ನು, ಚರಿತ್ರೆಕಾರರನ್ನು ಹೆಚ್ಚಾಗಿ ಆಕರ್ಷಿಸಿರದ, ಆದರೆ ಭಾರತ ಚರಿತ್ರೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೆಲವು ವಸ್ತು ವಿಷಯಗಳ ಸುತ್ತ ಹೆಣಿಯಲಾಗಿದೆ. ಆ ಮೂಲಕ ಪಶ್ಚಿಮ ಕರಾವಳಿಯ ವೀರಗಾಥೆಹಲ ಒಂದು ಘಟ್ಟವನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ.” DRIVE