“Book Descriptions: ಆರ್ಯರು ಹೊರಗಿನಿಂದ ಬಂದು ಸಿಂಧೂ ನದಿಯ ದಡದಲ್ಲಿ ನೆಲಸಿದ್ದರೆ? ಹಾಗಾದರೆ ದಕ್ಷಿಣ ಭಾರತದಲ್ಲಿ ನೆಲೆಗೊಂಡ ದ್ರಾವಿಡರು ಯಾರು? ಸಾವಿರಾರು ವರ್ಷಗಳ ಹಿಂದೆ ಸಾಕಷ್ಟು ಉಚ್ರಾಯ ಸ್ಥಿತಿಯಲ್ಲಿದ್ದ ಸಿಂಧೂ ನಾಗರಿಕತೆ ಇದ್ದಕ್ಕಿದ್ದಂತೆ ಕೊನೆಗೊಂಡಿದ್ದೇಕೆ? ಆರ್ಯರು ಮತ್ತು ದ್ರಾವಿಡರಲ್ಲಿ ಸಾಮ್ಯತೆ ಇದೆಯೇ? ಇವರಿಬ್ಬರೂ ಒಂದೇ ಮೂಲದಿಂದ ವಲಸೆ ಬಂದವರಿದ್ದರಬಹುದೆ?
ಹೀಗೆ ಆರ್ಯರ ಮೂಲವನ್ನು ಈ ಕಾದಂಬರಿಯಲ್ಲಿ ಬೆನ್ನತ್ತಿ ಹೊರಟಿದ್ದಾರೆ ಗಣೇಶಯ್ಯನವರು. ಜೊತೆಗೆ ಭಾರತವನ್ನು ಶಾಶ್ವತವಾಗಿ ತನ್ನ ಅಧೀನದಲ್ಲಿರಿಸಿಕೊಳ್ಳಬೇಕೆಂದು ಹೊರಗಿನ ಶಕ್ತಿಗಳು ಪ್ರಯತ್ನಿಸಿದ್ದರ ಕುರಿತೂ ಸಾಕಷ್ಟು ಮಾಹಿತಿ ಇದೆ. ಎಡಕಲ್ಲುಗುಡ್ಡದ ಪುರಾತನ ಇತಿಹಾಸಕ್ಕೂ ಆರ್ಯರಿಗೂ ಇರುವ ಸಂಬಂಧವನ್ನು ಕುತೂಹಲ ಕೆರಳಿಸುವಂತೆ ವರ್ಣಿಸಿದ್ದಾರೆ. ಪುರಾಣ-ಇತಿಹಾಸ-ಚರಿತ್ರೆಗಳೆಲ್ಲವೂ ಇಲ್ಲಿ ಒಂದರೊಳಗೊಂದು ಮಿಳಿತವಾಗಿ ಹೊಸದೇ ಆಯಾಮವನ್ನು ಸೃಷ್ಟಿಸಿವೆ.
ಭಿನ್ನ ವಿಷಯಗಳ ಮೂಲಕ ಮತ್ತು ಕುತೂಹಲ ಬರವಣಿಗೆಯಿಂದಾಗೆ ಹೊಸದೇ ಓದುಗ ವರ್ಗನ್ನು ಸೃಷ್ಟಿಸಿರುವ ಗಣೇಶಯ್ಯನವರ ಹನ್ನೆರಡನೆಯ ಕೃತಿ ಇದು.” DRIVE