ಅಮೀಬಾ | Amoeba
(By Bhageeratha) Read EbookSize | 29 MB (29,088 KB) |
---|---|
Format | |
Downloaded | 696 times |
Last checked | 16 Hour ago! |
Author | Bhageeratha |
ಕಾದಂಬರಿಯ ಕೇಂದ್ರಬಿಂದು ವಿಖ್ಯಾತ್ ಬಾಲ್ಯದಲ್ಲಿ ತಂತ್ರಜ್ಞಾನದೆಡೆಗಿನ ಕುತೂಹಲದಿಂದ ತನ್ನ ಮಾಮೂಲಿ ಕಂಪ್ಯೂಟರ್ ನ್ನು ಅಪಗ್ರೇಡ್ ಮಾಡುವುದರಿಂದ ಹಿಡಿದು ಬ್ರೌಸಿಂಗ್ ಸೆಂಟರ್ ಲ್ಲಿ ಪೋಲೀ ವೀಡಿಯೋಗಳನ್ನು ನೋಡುವ ಅವಧಿಯನ್ನ ವಿಸ್ತರಿಸುವ ಮಟ್ಟಕ್ಕೆ ಪರಿಣಿತನಾಗುತ್ತಾನೆ.
ತಾರುಣ್ಯಕ್ಕೆ ಬರುತ್ತಿದ್ದಂತೆ ಆತನ ಮಾದಕ ವ್ಯಸನ ಪ್ರಪಂಚದ ಅಮಲು, ವಿಲಾಸಿ ವೈಭೋಗ ಜೀವನ, ಸೆಲಿಬ್ರಿಟಿ ಪ್ರೇಯಸಿ, ರಾಜಕಾರಿಣಿಗಳ ಪುಂಡ ಮಕ್ಕಳ ಸಖ್ಯ, ಹಣವಂತ ಕುಳಗಳಿಗೋಸ್ಕರ ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಗಳನ್ನೇ ಹ್ಯಾಕ್ ಮಾಡುತ್ತಾನೆ. ಖಯಾಲಿಗೋಸ್ಕರ ಸರ್ಕಾರದ ಖಜಾನೆಯನ್ನೂ ಹ್ಯಾಕ್ ಮಾಡುತ್ತಾನೆ. ರಾತೋರಾತ್ರಿ ಪೋಲಿಸ್, ಸಿಐಡಿ, ಸಿಸಿಬಿ, ಇಡಿ, ಎನ್ಸಿಬಿ. ಎಲ್ಲರಿಗೂ ಬೇಕಾಗಿರುವ ಸ್ಟಾರ್ ಕ್ರಿಮಿನಲ್ -ಇಂಟರ್ ನ್ಯಾಷನಲ್ ಹ್ಯಾಕರ್ ಎಂದು ಮೀಡಿಯಾದಲ್ಲಿ ರಾರಾಜಿಸಲು ಶುರುವಾಗುತ್ತಾನೆ.
ವಿಖ್ಯಾತ್ ನ ಬಂಧನದ ನಂತರ ಅವನೊಬ್ಬ ಇಂಟರ್ ನ್ಯಾಷನಲ್ ಹ್ಯಾಕರ್ ಮತ್ತು ಬಿಟ್ ಕಾಯಿನ್ ಸೃಷ್ಟಿಕರ್ತ ಎಂದು ತಿಳಿದಾಗ ತನಿಖಾಧಿಕಾರಿಗಳು ದಿಗ್ಭ್ರಮೆಗೊಳ್ಳುತ್ತಾರೆ.
ಕರ್ನಾಟಕದ ಮುಕ್ಕಾಲು ಜನರಲ್ಲಿ ಬಿಟ್ ಕಾಯಿನ್ ಬಗ್ಗೆ ಅರಿವು ಮೂಡಿಸಿದ ವಿಖ್ಯಾತ್ ಬಂಧನದ ವಿಷಯ ತಿಳಿದು ಪ್ರಭಾವಿಗಳೆಲ್ಲ ತಮ್ಮ ಹೆಸರು ಅಚೆ ಬಂದರೆ ಮುಂದೇನು ಎಂದು ವಿಚಲಿತರಾಗುತ್ತಾರೆ.
ಇಂತಹ ರೋಚಕ ಸಂದರ್ಭದಲ್ಲಿ ಅವನು ಜೈಲು ಪಾಲಾಗುತ್ತಾನಾ ಅಥವಾ ವಿಖ್ಯಾತ ನ ಕ್ರೈಮ್ ನೆಟ್ವರ್ಕ್ ಲ್ಲಿರುವವರು ತಮ್ಮ ಉಳಿವಿಗೆ ವಿಖ್ಯಾತ ನನ್ನು ರಕ್ಷಿಸಿಕೊಳ್ಳುತ್ತಾರಾ ? ಎನ್ನುವ ಕುತೂಹಲಕಾರಿ ಅಂಶಗಳೇ ಅಮೀಬಾ ಕಾದಂಬರಿಯ ಸಾರ.”