“Book Descriptions: ಮಹಾಭಾರತದಲ್ಲಿ ನಡೆದ 18 ದಿನಗಳ ಯುದ್ಧದ ಅವಧಿಯನ್ನೇ ಮೂಲವಾಗಿರಿಸಿಕೊಂಡು ಬರೆದ ಕಾದಂಬರಿ-ಆ ಹದಿನೆಂಟು ದಿನಗಳು. ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ರಚಿಸಿದ್ದು, ಭಗವದ್ಗೀತೆಯ ಪಠ್ಯ ಬೋಧನೆಯೇ ಕಾದಂಬರಿಯ ಜೀವಾಳವಾಗಿದೆ. ಯುದ್ಧ ಪ್ರಸಂಗಗಳು, ಸಂಬಂಧಿಕರನ್ನು ಕೊಲ್ಲಲ್ಲು ಅರ್ಜುನನ ನಿರಾಕರಣೆ, ಇದಕ್ಕೆ ವಿರುದ್ಧವಾಗಿ ಕೃಷ್ಣನ ಸಮಜಾಯಿಷಿ, ಯುದ್ಧದಲ್ಲಿ ಅನಿವಾರ್ಯವಾಗಿ ಬಳಸಲೇಬೇಕಾದ ರಕ್ಷಣಾತ್ಮಕ ತಂತ್ರಗಳು- ಪ್ರತಿತಂತ್ರಗಳು, ಇಲ್ಲಿ ನೀತಿ-ಅನೀತಿಯ ಪ್ರಶ್ನೆಯೇ ಇಲ್ಲ. ಏಕೆಂದರೆ, ಅದು ರಣರಂಗ. ಇಲ್ಲಿ ಎಲ್ಲವೂ ಧರ್ಮವೇ! ಸ್ವಲ್ಪ ಯಾಮಾರಿದರೂ ಮೃತ್ಯು ಗೆಲ್ಲುತ್ತದೆ. ಇಂತಹ ಭೀಕರ ಹಾಗೂ ವಾಸ್ತವದ ನಿತ್ಯ ಸತ್ಯಗಳನ್ನು ಬೋಧಿಸುವ ಮಹಾಭಾರತದ ಯುದ್ಧವು ನೀತಿ ಹಾಗೂ ಬೋಧಪ್ರಧಾನವಾಗಿದೆ. ಎಲ್ಲರಿಗೂ ತಿಳಿದಿರುವ ಮಹಾಭಾರತದ ಯುದ್ಧವನ್ನು ಮತ್ತೇ ಮತ್ತೆ ಕುತೂಹಲದೊಂದಿಗೆ ಓದಿಸಿಕೊಂಡು ಹೋಗುವುದೇ ಈ ಕಾದಂಬರಿಯ ಶೈಲಿಯ ಆಕರ್ಷಣೆ. ಮೊದಲ ಮುದ್ರಣ 2012” DRIVE