“Book Descriptions: ನನ್ನ ಸ್ವಂತ ನಂಬಿಕೆಯನ್ನು ಒಂದು ಪ್ರಬಂಧದಲ್ಲಿ ಸಮಗ್ರವಾಗಿಯೂ ಕಾರಣ ಮಿವರಣೆಯೊಡನೆಯೂ ರೂಪಗೊಳಿಸಬೇಕೆಂಬ ಆಲೋಚನೆ ಬಹುದಿನಗಳಿಂದ ನನ್ನ ಮನಸ್ಸಿನಲ್ಲಿತ್ತು. ಆ ಕೆಲಸವನ್ನು ಈ ಸಣ್ಣ ಪುಸ್ತಕದಲ್ಲಿ ತಕ್ಕಮಟ್ಟಿಗೆ ಪ್ರಯತ್ನಿಸಿದೆ.
ನಮ್ಮ ಬದುಕು ಚೆನ್ನಾಗಿ ಸಾಗಿ, ಸಾರ್ಥಕವಾಗಬೇಕಾದರೆ ನಮಗೆ ಒಂದು ಒಳ್ಳೆಯ ಗುರಿಯ ತಿಳಿವಳಿಕೆಯೂ, ಆ ಗುರಿಯನ್ನು ಮುಟ್ಟಿಸಬಲ್ಲ ದಾರಿಯ ತಿಳಿವಳಿಕೆಯೂ ಇರಬೇಕು. ಅಂಥ ಜೀವನಯಾತ್ರೆಯ ನಕಾಶೆಯೊಂದನ್ನು ಗುರುತು ಮಾಡಲು ಈ ಲೇಖನದಲ್ಲಿ ಯತ್ನಿಸಿದೆ.
ಅದು ಸುಲಭಸಾಧ್ಯವಾದ ಯೋಚನೆಯಲ್ಲ; ನಮ್ಮ ಪುರಾತನ ಮಹನೀಯರು ನಮಗೆ ತಕ್ಕ ಗುರಿಗೊತ್ತುಗಳನ್ನು ತಿಳಿಸಿಕೊಟ್ಟಿದ್ದಾರೆ ಎಂಬುದು ದಿಟ. ಆದರೆ ಈ ಹೊತ್ತು ಲೋಕ ಹೇಗಿದೆ? ಹತ್ತಾರು ಹೊಸಹೊಸ ಶಾಸ್ತ್ರಗಳೂ, ಹೊಸಹೊಸ ಮತಗಳೂ ತಲೆಯೆತ್ತಿ, ಹತ್ತಾರು ದಿಕ್ಕುಗಳಿಗೆ ನಮ್ಮ ಬುದ್ಧಿ ಮನಸ್ಸುಗಳನ್ನು ಸೆಳೆದಾಡಿ, ಹಳೆಯ ನಿಶ್ಚಯವನ್ನು ಹೋಗಲಾಡಿಸಿ, ಹೊಸ ಸಂದೇಹ ಸಂಕ್ಷೋಭೆಗಳನ್ನು ಹರಡಿವೆ. ಈ ಹೊಸ ವಿಜ್ಙಾನ ವಿಕ್ಷಿಪ್ತವಾದ ವಾತಾವರಣದಲ್ಲಿ ನಾವು ನಾವು ನಮ್ಮ ಜೀವನ ಸಮಸ್ಯಗಳನ್ನು ಪುನರ್ವಿಚಾರದಿಂದ ವಿಮರ್ಶೆ ಮಾಡಬೇಕಾಗಿದೆ.
ಇದು ಪಂಡಿತರಿಗಾಗಿ ಬರೆದ ಗ್ರಂಥವಲ್ಲ. ದೇಶದಲ್ಲಿ ಬಹುಮಂದಿಯಾದ ಅತಿ ಸಾಮಾನ್ಯ ಜನರನ್ನು ದೃಷ್ಟಿಯಲ್ಲಿರಿಸಿಕೊಂಡು ಬರೆದ ಬರವಣಿಗೆ ಇದು.
ಇದನ್ನೋದುವವರಿಗೆ ಅಲ್ಲಲ್ಲಿ ಪ್ರಶ್ನೆಗಳೂ ಸಂದೇಹಗಳೂ ತೋರಬಹುದು. ಅಂಥವರು ಈ ಪುಸ್ತಕವನ್ನು ಕಡೆಯವರೆಗೂ ಓದಿದ ಬಳಿಕ ವಿಮರ್ಶೆಗೆ ಹೊರಡಬಹುದೆಂದು ಲೇಖಕನ ಮಿಜ್ಙಾಪನೆ.” DRIVE