“Book Descriptions: ರಾಮಾಯಣದಲ್ಲಿ ಲಕ್ಷ್ಮಣನನ್ನು ‘ಸಾವಿನ ಸ್ಥಿತಿಯಿಂದ’ ಹೊರಗೆ ತಂದ ‘ಸಂಜೀವನಿ’ ಗೆ ಅಂಥಹ ಅಪಾರ ಶಕ್ತಿ ಇದ್ದರೆ ಅದರಿಂದ ಮಾನವನ ಮುದಿತನವನ್ನೆ ‘U’ turn ಗೊಳಿಸಬಹುದು ಎಂದು ನಂಬಿ, ಕೆಲವು ಪಾಶ್ಚಾತ್ಯ ಸಂಶೋಧಕರು ಆ ಸಸ್ಯವನ್ನು ಹುಡುಕಲು ಪ್ರಯತ್ನಿಸುತ್ತಾರೆ. ಅವರಿಗೆ ಬೆನ್ನೆಲುಬಾಗಿ ನಿಂತ ಕೆಲವು ಕಾರ್ಪೊರೇಟ್ ಸಂಸ್ಥೆಗಳು ಭಾರತದ ಕೆಲವು ಅಮಾಯಕ ವಿಜ್ಞಾನಿಗಳನ್ನು ತಮ್ಮ ಷಡ್ಯಂತ್ರಕ್ಕೆ ಸಿಲುಕಿಸಿ ಆ ಸಸ್ಯದ ಹುಡುಕಾಟದಲ್ಲಿ ತೊಡಗಿಸುತ್ತಾರೆ. ಆ ಸಸ್ಯವನ್ನು ಭಾರತದಿಂದ ಕದ್ದೊಯ್ದು ವ್ಯಾಪಾರಿಕರಣಗೊಳಿಸಲು. ‘ಕಪಿಲಿಪಿಸಾರ’ ಸಂಜೀವನಿಯ ಬಗ್ಗೆ, ಆಗಿನ ಕಾಲದ ‘ವಾನರ’ ಕುಲದ ಬಗ್ಗೆ ಹಾಗೂ ಆ ಸಸ್ಯದ ಹುಡುಕಾಟದಲ್ಲಿ ನಡೆದ ರಹಸ್ಯ ಯೋಜನೆಗಳ ಬಗೆಗಿನ ಕಥಾನಕವನ್ನು ಈ ಕಾದಂಬರಿ ಒಳಗೊಂಡಿದೆ.” DRIVE